ಇಸ್ಲಾಮೀಕರಣಕ್ಕೆ ಇಸ್ರೇಲೀಕರಣವೇ ಮದ್ದು

ಆತನಿಗೆ ೬೭ ವರ್ಷ ವಯಸ್ಸಾಗಿತ್ತು. ಮುದುಕನ ಬುದ್ದಿಯೂ ಅಷ್ಟರಲ್ಲೇ ಇತ್ತು. ಆತನಿಗೆ ಸ್ವಯಂ ನಡೆಯಲಾಗುತ್ತಿರಲಿಲ್ಲ. ಆತ ಎಲ್ಲಿಗೇ ಹೋಗಬೇಕಾಗಿದ್ದರೂ ವೀಲ್‌ಚೇರಿನಲ್ಲಿ ಕೂರಿಸಿಕೊಂಡು ಉರುಳಿಸಿಕೊಂಡು ಹೋಗಬೇಕಾಗಿತ್ತು. ಜೊತೆಗೆ ಆತ ಪಾರ್ಶ್ವವಾಯು ಪೀಡಿತನಾಗಿದ್ದ. ಹೀಗೆಲ್ಲಾ ಇದ್ದರೂ ಆತ ದಿನಕ್ಕೆ ಐದು ಬಾರಿ ನಮಾಜು ಮಾಡುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಆತ ಮನೆಯಲ್ಲೆಂದೂ ನಮಾಜು ಮಾಡುತ್ತಿರಲಿಲ್ಲ. ಮನೆಯ ಸಮೀಪದ ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದ. ೬ ಜನ ಶ್ರೇಷ್ಠ ಅಂಗರಕ್ಷಕರನ್ನಿಟ್ಟುಕೊಂಡೇ ಆತ ತಿರುಗುತ್ತಿದ್ದ. ಇಸ್ಲಾಮೇತರರ ಬಗ್ಗೆ ಭಯಂಕರವಾಗಿ ಗುಡುಗುತ್ತಿದ್ದ  ಆತನನ್ನು ಮುಸ್ಲಿಮರು ಇಸ್ಲಾಮಿನ ಸಂತ ಎಂದೇ ಕರೆಯುತ್ತಿದ್ದರು. ಆತ ಜೊಲ್ಲು ಸಿಡಿಸುತ್ತಾ ಕಾಫಿರರ ನಿರ್ನಾಮಕ್ಕೆ ಕರೆ ನೀಡುತ್ತಿದ್ದರೆ ನೂರಾರು ಯುವಕರು ಅದಕ್ಕೆ ಓಗೊಡುತ್ತಿದ್ದರು. ಆತ ಮುಸ್ಲಿಮರು ಕರೆಯುವಂತೆ ನಿಜಕ್ಕೂ ಜಿಹಾದಿನ ಸಂತನೇ ಆಗಿದ್ದ, ಭಯೋತ್ಪಾದಕರಿಗೆ ಸ್ಪೂರ್ತಿಯೇ ಆಗಿದ್ದ. ಜಗತ್ತಿನಾದ್ಯಂತದ ಮುಸ್ಲಿಮರು ಪ್ಯಾಲೆಸ್ಟೀನಿನದಾಗಿದ್ದ ಭೂಮಿಯನ್ನು ಇಸ್ರೇಲಿಗಳಿಂದ ಕಿತ್ತುಕೊಳ್ಳಲು ಶ್ರಮಿಸಬೇಕೆಂದು ನೀಡುತ್ತಿದ್ದ ಕರೆಗೆ ಮುಸಲ್ಮಾನರು ಓಗೊಡುತ್ತಿದ್ದರು. ಕೊಟ್ಯಂತರ ಡಾಲರ್ ಹಣ ದೇಣಿಗೆ ನೀಡುತ್ತಿದ್ದರು. ಹೀಗೆ ಗಾಜಾ ವಿಷಯವನ್ನು ವೃಣ ಮಾಡಿದ್ದೇ ಈ ಮುದುಕ.
ಆತ ಷೇಕ್ ಅಹ್ಮದ್ ಯಾಸಿನ್. ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಕಟ್ಟಿ ಬೆಳೆಸಿದಾತ. ಗಾಜಾ ಪಟ್ಟಿಯಲ್ಲಿ ಮಾರಣ ಹೋಮ ನಡೆಸಿದಾತ. ಮುದುಕನಾದರೂ ರಕ್ತಪಿಪಾಸುವಾಗಿದ್ದಾತ. ಮಹಾ ಒರಟ. ಆತ ಎಷ್ಟೊಂದು ಜಿಗುಟನೂ ಹಠಮಾರಿಯೂ ಆಗಿದ್ದನೆಂದರೆ ಗಾಜಾ ಪಟ್ಟಿ ಬಿಟ್ಟು ಎಂದೂ ಹೊರಗೆ ಹೋಗುತ್ತಿರಲಿಲ್ಲ. ಆದರೆ ನಾಳೆ ಉದುರುಹೋಗುವ ಈ ಮುದುಕ ಬೊಗಳಿಕೊಂಡು ಸಾಯಲಿ ಎಂದು ಇಸ್ರೇಲ್ ಬಿಟ್ಟುಬಿಡಲಿಲ್ಲ. ಲ್‌ಚೇರಲ್ಲಿರುವ ಈ ತಾತಪ್ಪನ ಮೇಲೆ ದ್ವೇಷವೇಕೆ ಎಂದು ಕನಿಕರ ವ್ಯಕ್ತಪಡಿಸಲಿಲ್ಲ.  ವಯಸ್ಸು ಏರಿದಂತೆ ಆತನ ಕಿರುಚಾಟವೂ ಹೆಚ್ಚಾಗುತ್ತಲೇ ಹೋಯಿತು. ಒಂದು ದಿನ ಇಸ್ರೇಲ್ ಮುಹೂರ್ತ ಏರ್ಪಡಿಸಿತು. ೨೨-೩-೨೦೦೪ರ ಮಟಮಟ ಮಧ್ಯಾಹ್ನ  ಇಸ್ರೇಲ್ ನೆಲದಿಂದ ಮೂರು ಹೆಲಿಕಾಪ್ಟರುಗಳು ರಾಕೇಟುಗಳನ್ನು ಹೊತ್ತು ಗಾಜಾಕ್ಕೆ ಹಾರಿದವು. ಮುದುಕ ಭಯೋತ್ಪಾದಕ ಮಸೀದಿಯ ಅಂಗಳದಲ್ಲಿ ವೀಲ್ ಚೇರಲ್ಲಿ ಕಳಿತು ಆಕಾಶಕ್ಕೆ ಕೈಎತ್ತಿ ಮೊರೆ ಇಡುತ್ತಿದ್ದ. ಇಸ್ರೇಲಿನ ರಾಕೆಟ್‌ಗಳು ಆತನನ್ನು ಕುಳಿತಲ್ಲೇ ಚೂರುಚೂರು ಮಾಡಿತು. ಆತನ ೬ ಮಂದಿ ಗಡ್ಡಧಾರಿ “ಶ್ರೇಷ್ಠ” ಅಂಗರಕ್ಷಕರೂ ಸತ್ತು ಬಿದ್ದರು. ಮುಸ್ಲಿಮರಲ್ಲದವರನ್ನು ಕೊಲ್ಲಿ, ಮುಸ್ಲಿಮೇತರ ರಾಜ್ಯಗಳನ್ನು ನಾಶಪಡಿಸಿ ಎನ್ನುತ್ತಿದ್ದವ ಕಾಫಿರರ ಕೈಯಿಂದ ಸತ್ತಿದ್ದ. ಅಂಥವನನ್ನು ಕೊಲ್ಲಲು ಇಸ್ರೇಲ್ ಯಾವ ಅನುಕಂಪವನ್ನೂ ತೋರಲಿಲ್ಲ. ಏಕೆಂದರೆ ಎರಡು ಸಾವಿರ ವರ್ಷಗಳಿಂದಲೂ ಇಸ್ರೇಲಿಗೆ ಇತಿಹಾಸ ಅನುಕಂಪವನ್ನು ತೋರಿಲ್ಲ. ಸಾವು, ವನವಾಸ, ಅಜ್ಞಾತವಾಸ, ಅಲೆಮಾರಿ ಬದುಕು, ಚಿತ್ರಹಿಂಸೆ, ಹತಾಶೆಗಳ ನಡುವೆಯೇ ಸ್ವಾಭಿಮಾನಗಳನ್ನು ಉಳಿಸಿಕೊಂಡ ಶ್ರೇಷ್ಠ ಪರಂಪರೆ ಯಹೂದಿಗಳದ್ದು. ಇತಿಹಾಸದಿಂದ ಪಾಠ ಕಲಿಯಬೇಕು ಎಂಬುದಕ್ಕೆ ಸೂಕ್ತ ಉದಾಹರಣೆ ಕೂಡಾ ಇಸ್ರೇಲ್. ಅಂಥ ಇಸ್ರೇಲ್ ಸಂಪಾದಿಸಿಕೊಂಡ ಹಠ ಬಹಳ ಕಷ್ಟಪಟ್ಟು ಸಂಪಾದಿಸಿಕೊಂಡ ಆಸ್ತಿ. ಸಂಘರ್ಷ ಇಸ್ರೇಲಿಗೆ ಅನಿವಾರ್ಯವೇ ಹೊರತು ಆಯ್ಕೆಯಲ್ಲ. ಅನಿವಾರ್ಯಗಳ ನಡುವೆಯೇ ಬೆಳೆದೂ ಬೆಳೆದೂ ಇಸ್ರೇಲಿಗೆ ಸಂಘರ್ಷವೇ ಬದುಕಾಗಿದೆ. ಅದೇ ಇಸ್ರೇಲನ್ನು ಉಳಿಸಿದೆ.
 ಯಾಸಿನ್ ಸತ್ತ ನಂತರ ಜಗತ್ತಿನ ಮುಸಲ್ಮಾನರೆಲ್ಲರೂ ಅರಚಿಕೊಂಡರು. ಭಾರತದ ಉತ್ತರಪ್ರದೇಶ, ಕಾಶ್ಮೀರಗಳಲ್ಲಿ ಮುಸಲ್ಮಾನರು ಎದೆಗೆ ಬಡಿದುಕೊಂಡು ಅತ್ತರು. ಅಂತಾರಾಷ್ಟ್ರೀಯ ಸಮುದಾಯಗಳೂ ಇಸ್ರೇಲಿಗೆ ಛೀಮಾರಿ ಹಾಕಿದವು. ವಿಶ್ವಸಂಸ್ಥೆಯೂ ಇಸ್ರೇಲ್ ಕ್ರಮವನ್ನು ಖಂಡಿಸಿತು. ವಿಶ್ವದ ೫೧ ಮುಸ್ಲಿಂ ದೇಶಗಳು ಇಸ್ರೇಲನ್ನು ಶತ್ರುದೇಶ ಎಂದು ಘೋಷಣೆ ಮಾಡಿತು. ಕೆಲವು ದೇಶಗಳ ರಾಯಭಾರ ಕಛೇರಿಗಳ ಮೇಲೆ ದಾಳಿಗಳಾದವು. ಆದರೆ ಇಸ್ರೇಲ್ ಅದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಅದು ಇನ್ನೊಂದು ಕಾರ್ಯಾಚರಣೆಯನ್ನು ರೂಪಿಸುತ್ತಿತ್ತು. ಯಾಸಿನ್ ಸತ್ತ ಮೇಲೆ ಹಮಾಸಿನ  ಸಂಸ್ಥಾಪಕ ಮತ್ತು ಯಾಸಿನ್ನನ ಉತ್ತರಾಧಿಕಾರಿಯಾಗಿ ಅಬ್ದಲ್ ಅಜೀಜ್ ರಂಟಿಸಿ ಎಂಬಾತನಿದ್ದ. ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಗೋಳಾಡುವುದರಲ್ಲಿ ಮತ್ತು ಹಣಸಂಗ್ರಹದಲ್ಲಿ ಈತ ಎತ್ತಿದ ಕೈಯಾಗಿದ್ದ. ಒಂದು ದಿನ ಇಸ್ರೇಲ್ ನ ಅದೇ ಮೂರು ಹೆಲಿಕಾಪ್ಟರ್‌ಗಳು ರಾಕೇಟ್‌ಗಳನ್ನು ಹೊತ್ತು ಗಾಜಾಕ್ಕೆ ತೆರಳಿತು. ಅದು ೨೦೧೪ರ ಏಪ್ರಿಲ್ ೧೭. ಯಾಸಿನ್ ಸತ್ತು ಒಂದು ತಿಂಗಳೂ ಆಗಿರಲ್ಲ. ಆಗಲೇ ಜಗತ್ತಿನಲ್ಲಿ ವಿರೋಧ ತಾರಕಕ್ಕೇರಿತ್ತು. ಆದರೂ ಇಸ್ರೇಲ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿತು.
ತಿಂಗಳೊಳಗೆ ಹಮಾಸ್‌ನ ಇಬ್ಬರು ನಾಯಕರನ್ನು ಹತ್ಯೆ ಮಾಡಿದ ಇಸ್ರೇಲ್‌ನ ವಿರುದ್ಧ ಮುಸ್ಲಿಂ ದೇಶಗಳು ಮತ್ತಷ್ಟು  ತೀವ್ರವಾಗಿ ಅಭಿಯಾನವನ್ನು ಕೈಗೊಂಡವು. ಮಂಗಳೂರಿನ ಸುರತ್ಕಲ್, ಉಲ್ಲಾಳಗಳ ಗೋಡೆಗಳಲ್ಲಿ  “ಇಸ್ರೇಲ್ ಎಂಬ ಭಯೋತ್ಪಾದಕ ರಾಷ್ಟ್ರಕ್ಕೆ ಧಿಕ್ಕಾರ” ಎನ್ನುವ ಚೀಟಿಗಳು ಕಂಡುಬಂದಿದ್ದು ಆಗಲೇ.
ಯಾರು ಏನೇ ಅಂದರೂ ಇಸ್ರೇಲ್ ಮುಸಲ್ಮಾನರಿಗೆ ಮದ್ದು ಮಾಡುವುದು ಹಾಗೆಯೇ. “ಅಲ್ಲಾಹನ ದಯೆಯಿಂದ ಇಸ್ರೇಲನ್ನು ನಿರ್ನಾಮ ಮಾಡುವೆವು” ಎಂಬ ಹಮಾಸ್‌ನ ಕನಸು  ಭವಿಷ್ಯದಲ್ಲೂ ಈಡೇರುವುದಿಲ್ಲ. ಪ್ಯಾಲೆಸ್ಟೀನ್ ಮತ್ತು ಹಮಾಸ್ ಇನ್ನು ದೇವರನ್ನೇ ಬದಲಿಸಬೇಕಷ್ಟೇ. ತನ್ನ ನಾಯಕರನ್ನು ಕಳೆದುಕೊಳ್ಳಲಾರಂಭಿಸಿದ ಮೇಲೆ ಹಮಾಸ್ ತನ್ನ ರಣತಂತ್ರವನ್ನು ಬದಲಿಸಿಕೊಂಡಿತು. ಇಸ್ರೇಲನ್ನು ಅಂತಾರಾಷ್ಟ್ರೀಯವಾಗಿ ಖಳನ ಸ್ಥಾನದಲ್ಲಿ ನಿಲ್ಲಿಸುವುದು  ಈಗ ಅದರ ಗುರಿ. ಜಗತ್ತಿನಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಮುಸಲ್ಮಾನ ಸಂಖ್ಯೆಯನ್ನು ಬಳಸಿಕೊಂಡು ಇಸ್ರೇಲ್ ಬಗ್ಗೆ ಅಪಪ್ರಚಾರ ಮತ್ತು “ಇಸ್ರೇಲ್ ಮಕ್ಕಳ ಮೇಲೆ ದಾಳಿ ಮಾಡುತ್ತಿದೆ” ಎಂಬ ಆರೋಪದಲ್ಲಿ ಕಾಣುವುದು ಕೂಡಾ ಹಮಾಸಿನ ಇದೇ ರಣತಂತ್ರ.
೧೬ ವರ್ಷದ ನಫ್ತಾಲಿ ಫ್ರಾಂಕೋಲ್, ಅದೇ ವಯಸ್ಸಿನ ಗಿಲಾಡ್ ಶೆಯರ್ ಮತ್ತು ೧೯ ವರ್ಷದ ಇಯಾಲ್ ಬಾಲಕರಲ್ಲವೇ? ಈ ಮೂವರು ಯಹೂದಿ ಬಾಲಕರು ಅಪಹರಣಕ್ಕೊಳಗಾಗಿ ಜೂನ್ ೧೨ರಂದು ವೆಸ್ಟ್ ಬ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಹಮಾಸ್ ಮಕ್ಕಳನ್ನು ಕೊಲ್ಲಬಹುದಾದರೆ ಇಸ್ರೇಲ್ ದಾಳಿಯಿಂದ ಪ್ಯಾಲೆಸ್ಟೀನ್ ಮಕ್ಕಳು ಸಾಯಬಾರದೇ? ಮಕ್ಕಳ ಮೇಲೆ ಪ್ರೀತಿ ಇರುವ ಉಗ್ರರು ಶಾಲೆಗಳಿಂದ ಮತ್ತು ಸಾರ್ವಜನಿಕ ಸ್ಥಳಗಳಿಂದಲೇ ರಾಕೆಟ್ ದಾಳಿ ನಡೆಸುವುದೇಕೆ? ಅಂಥ ರಾಕೆಟ್ ಕೇಂದ್ರಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನೇ ಅಂತಾರಾಷ್ಟ್ರೀಯ ಸುದ್ಧಿ ಮಾಡುತ್ತಿರುವ ಮಾಧ್ಯಮಗಳು ಪ್ಯಾಲೆಸ್ಟೀನ್ ಮಕ್ಕಳ ಬಗ್ಗೆ ವಿನಾ ಕಾರಣ ಅನುಕಂಪವನ್ನು ಹುಟ್ಟಿಸುತ್ತಿವೆ. ಆದರೆ ಈ ಪ್ಯಾಲೆಸ್ಟೀನಿನ ಮಕ್ಕಳಾದರೂ ಎಂಥವರು? ಇತ್ತೀಚೆಗೆ ಹಮಾಸ್ ಅಲ್ ಅಸ್ಕಾ ಚಾನಲ್ಲಿನಲ್ಲಿ ಮಕ್ಕಳ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಅನೇಕ ಮಕ್ಕಳು ಅದರಲ್ಲಿ ಭಾಗವಹಿಸಿದ್ದವು. ಎಲ್ಲಾ ಮಕ್ಕಳೂ ಇಸ್ರೇಲ್ ವಿರುದ್ಧ ಮಾತಾಡಿದವು. ಒಟ್ಟು ಸೇರಿ “ಪವಿತ್ರ ಬಲಿದಾನಕ್ಕೆ, ಹೆಮ್ಮೆಯ ಜಿಹಾದಿಗೆ, ಸ್ವಾತಂತ್ರ್ಯಕ್ಕಾಗಿ ರಕ್ತ” ಎಂದು ಹಾಡಿದವು.  ಇಂಥ ಮಕ್ಕಳು ಉಳಿದರೆ ಮುಂದಿನ ಕಥೆ ಏನು? ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದಾದರೆ ಇದನ್ನೂ ಕೀಳಬೇಕು. ಅಲ್ಲದೆ ಮಕ್ಕಳು ಮುಗ್ದರೇ ಇರಬಹುದು ಎಂದುಕೊಂಡರೂ ಹಮಾಸ್ ಕೈಯಲ್ಲಿ ಮಾನವ ಗುರಾಣಿಗಳಾಗಿ ಬಳಕೆಯಾಗುತ್ತಿರುವ ಅವರ ಮುಂದಿನ ಭವಿಷ್ಯವೇನು? ಹಮಾಸ್ ಆ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡದೇ ಇದ್ದೀತೇ? ರಾಕೆಟ್ ದಾಳಿ ಮಾಡುತ್ತಿರುವಲ್ಲಿ ಮಕ್ಕಳಿದ್ದಾರೆ ಎಂದುಕೊಂಡರೆ ಇಸ್ರೇಲಿನ ಕಥೆ ಏನು?  ಇಸ್ರೇಲಲ್ಲೂ ಮಕ್ಕಳಿದ್ದಾರೆ. ಆಡುವ ಮೈದಾನದಲ್ಲೂ ಬಾಂಬ್ ನಿರೋಧಕ ಕೊಠಡಿಗಳನ್ನು ಕಟ್ಟಿಯೇ, ಅದರ ಬಳಕೆಗೆ ತರಬೇತಿಯನ್ನು ಪಡೆದೇ ಇಸ್ರೇಲಿ ಮಕ್ಕಳು ಆಡಲು ಹೋಗಬೇಕು. ಅಂಥ ಪರಿಸ್ಥಿತಿಯನ್ನಿಟ್ಟುಕೊಂಡು ಇಸ್ರೇಲ್ ಮಕ್ಕಳಿದ್ದಾರೆಂಬ ಕಾರಣಕ್ಕೆ ದಾಳಿ ನಡೆಸದೇ ಇದ್ದರೆ ಇಸ್ರೇಲಿನ ಮಕ್ಕಳೇ ಜೀವ ಕಳೆದುಕೊಳ್ಳಬಹುದು. ತನ್ನ ರಕ್ಷಣೆಗೆ ಮದ್ದು ಮಾಡಬೇಕೆಂದರೆ ಇಸ್ರೇಲ್ ಹಾಗೆ ಮಾಡಬೇಕು. ಶಾಲೆಗಳಿಂದ ರಾಕೆಟ್ ದಾಳಿ ಮಾಡಿದರೆ ಶಾಲೆಯನ್ನೇ ಉಡಾಯಿಸಬೇಕು ಎಂಬ ನಿಲುವು ಇಸ್ರೇಲಿನದ್ದು.
೧೯೭೨ರಲ್ಲಿ ಮ್ಯೂನಿಚ್ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ ಹನ್ನೊಂದು ಜನ ಇಸ್ರೇಲಿ ಆಟಗಾರರನ್ನು ಪ್ಯಾಲೆಸ್ಟೀನ್ ಭಯೋತ್ಪಾದಕರು ಕೊಂದಿದ್ದರು. ಆ ಕೃತ್ಯವನ್ನು ವಿಶ್ವಾದ್ಯಂತದ ಮತಾಂಧ ಮುಸಲ್ಮಾನರು wrath of god (ದೇವರ ಕ್ರೋಧ) ಎಂದು ಬಣ್ಣಿಸಿದ್ದರು. ಈಗ ಇವರನ್ನು ಕೊಂದರೆ ಅದು ಅನ್ಯಾಯವಾಯಿತೇ? ಹೀಗೆ ಕೊಲೆಗೂ ಒಂದು ತಾತ್ತ್ವಿಕ ವಿವರಣೆಯನ್ನು ಕೊಡುವುದು ಇಸ್ಲಾಮಿನ “ಶಾಂತಿ ಪ್ರಿಯತೆ”ಗೆ ಸಾಕ್ಷಿ. ಗಾಜಾದಲ್ಲೀಗ ಹಮಾಸ್‌ನ ತಳ ಕಾಯುತ್ತಿದೆ.ಇಸ್ರೇಲ್ ವಿರುದ್ಧ ಜಿಹಾದಿ ಸಂಘಟನೆಗಳೆಲ್ಲವೂ ಒಟ್ಟು ಸೇರುವ ಚಿಂತನೆ ನಡೆಸಿವೆ.     
ಈ ಹೊತ್ತಲ್ಲಿ  ನಮ್ಮ ಗಾಂಧಿ ಮಹಾತ್ಮ ಹೇಳಿದ ಮಾತೊಂದು ನೆನಪಾಗುತ್ತದೆ. ೧೯೨೧ರಲ್ಲಿ ಅವರು ಬರೆಯಲು ಏನೂ ವಿಷಯ ಸಿಗದಿರುವುದರಿಂದಲೋ ಅಥವಾ ಹೊಸ ಮುಸಲ್ಮಾನ ಗೆಳೆಯರು ಸಿಕ್ಕಿದ್ದರಿಂದಲೋ  ಏನೋ ಹೀಗೆ ಬರೆದಿದ್ದರು the jews cannot receive soveregn rights in a place which has been held for centuries by muslim powers by right of religious conqest ಎಂದು ಬರೆದಿದ್ದರು. ಮುಂದೆ ಇಸ್ರೇಲ್ ಸ್ಥಾಪನೆಯಾದ ಮೇಲೆ ಕೂಡಾ ಯಹೂದಿಗಳ ನಡೆಯನ್ನು ಅವರು it is wrong and inhuman ಎಂದು ಟೀಕಿಸಿದ್ದರು. ಪುಣ್ಯಕ್ಕೆ ಇಸ್ರೇಲಿನಲ್ಲಿ ಗಾಂಧಿಯಂಥ ಮಹಾತ್ಮರು ಹುಟ್ಟಲಿಲ್ಲ. ಹುಟ್ಟಿದ್ದರೆ ಇಸ್ರೇಲಿನೊಳಗೊಂದು ದೇಶವನ್ನು ಹುಟ್ಟಿಸಿಯೇಬಿಡುತ್ತಿದ್ದರು. ಮುಸಲ್ಮಾನರ ಅಹಿಂಸಾತತ್ತ್ವಗಳನ್ನು ಇಂದಿನ ಗಾಂಧಿವಾದಿಗಳು ಸಾಕ್ಷಾತ್ ಗಾಂಧಿಯಂತೆಯೇ ನೋಡುತ್ತಿದ್ದಾರೆ  ಎನ್ನುವುದು ಗಾಂಧಿವಾದದ “ಪ್ರಾಮಾಣಿಕತೆಗೆ” ಸಾಕ್ಷಿ.
ಮುಸಲ್ಮಾನರು ಕಾಫಿರರ ವಿರುದ್ಧ ಯುದ್ಧ ಕೈಗೊಳ್ಳುವಾಗ ಒಂದು ವಿಚಿತ್ರ ಆವೇಶದಲ್ಲಿರುತ್ತಾರಂತೆ. ಈ ಯುದ್ಧದಲ್ಲಿ ತಮಗೆ ಸೋಲಾಗಲಾರದು ಎಂದು ಅವರು ಭ್ರಮಿಸಿರುತ್ತಾರಂತೆ. ಕೊನೆಗೆ ಸೋಲನ್ನೂ ಕೂಡಾ ಗೆಲುವಿನೆಂಬಂತೆಯೇ ಕಾಣಲಾರಂಭಿಸುತ್ತಾರಂತೆ. ಆದರೆ ಭಯೋತ್ಪಾದಕರಿಗೆ ಹೋರಾಡುವ ವೊದಲೇ ಸೋಲಿನ ರುಚಿ ಹತ್ತಿಸಿದವರು ಇಸ್ರೇಲಿಗಳು ಮಾತ್ರ. ಜಗತ್ತಿನ ಮುಸಲ್ಮಾನರು ಗಂಭೀರವಾಗಿ ಪರಿಗಣಿಸುವುದು ಇಸ್ರೇಲಿಗಳನ್ನು ಮಾತ್ರ. ಏಕೆಂದರೆ  ಭಯ! ಭಯೋತ್ಪಾದಕರೂ ಭಯಪಡುತ್ತಾರೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದು ಇಸ್ರೇಲ್. ಭಾರತದಲ್ಲೂ  ಇಸ್ರೇಲ್ ವಿರುದ್ಧ ಪ್ರತಿಭಟನೆಗಳು ನಡೆಯುವುದು ಏಕೆ ಅಂದುಕೊಂಡಿರಿ. ಇಸ್ರೇಲ್ ಮೇಲಿನ ಭಯ ಭಯ ಭಯ. ಅಷ್ಟಕ್ಕೂ ಪ್ರತಿಭಟನೆ ನಡೆಸಬೇಕೆಂದಿದ್ದರೆ ವೊನ್ನೆ ಅವರವರೇ ಕಿತ್ತಾಡಿಕೊಂಡಾಗ ಪ್ರತಿಭಟನೆ ನಡೆಸಬೇಕಿತ್ತು ತಾನೇ?
ಗಾಂಧಿ ಮಾತಿಗೆ ತಲೆ ಕೆಡಿಸಿಕೊಂಡರೆ  ಇಂದು ಒಂದಗಳು ಅನ್ನವೂ ಹುಟ್ಟದು.
ಭಾರತಕ್ಕೂ ಬೇಕಾಗಿದೆ ಇಸ್ರೇಲ್ ಮದ್ದು. 

Advertisements

4 Comments

  1. I take a chance appreciate your courage to write against Islam. Be aware sir. Pratap Simha ji was on terrorist hit for the same cause.

  2. “…ಅದು ೨೦೧೪ರ ಏಪ್ರಿಲ್ ೧೭. ಯಾಸಿನ್ ಸತ್ತು ಒಂದು ತಿಂಗಳೂ ಆಗಿರಲ್ಲ…. ” ೨೦೦೪ ಅಲ್ಲವೇ?

  3. ನನಗೆ ಮೊದ ಮೊದ್ಲು ಅ೦ದ್ರೆ ತು೦ಬಾ ಚಿಕ್ಕವನಾಗಿದ್ದಾಗ ಆನಿಸ್ತಾ ಇತ್ತು, ಪ್ಯಾಲಸ್ತೀನ್ ಒಳ್ಳೇದು, ಇಸ್ರೇಲ್ ಮಾಡೋಕೆ ಕೆಲಸ ಇಲ್ದೆ ಜಗಳ ಕಾಯ್ತಾ ಇರುತ್ತೆ ಅ೦ತ. ಹೀಗನ್ನಿಸಲು ಆವಾಗಿನ “ಮಾದ್ಯಮ” ಕಾರಣ ಆಗಿತ್ತೇನೋ. ಕಾಲಾನುಕ್ರಮದಲ್ಲಿ ಅರಬರ ದೌರ್ಜನ್ಯಗಳು ಗೊತ್ತಾಗ್ತಾ ಹೋದವು. ಹೆ೦ಗೆ ಅರಬ್ ರಾಷ್ಟ್ರಗಳೆಲ್ಲಾ ಒ೦ದಾಗಿ ಅತ್ಯ೦ತ ದೊಡ್ಡ ಸೈನ್ಯ ಕಟ್ಟಿ ಇಸ್ರೇಲ್ ಅನ್ನು ನಕ್ಷೆ ಇ೦ದಾನೆ ಅಳಿಸಿ ಹಾಕುವ ಹುಮ್ಮಸ್ಸಿನಿ೦ದ ಹೋಗಿ ಕೇವಲ ಆರೇ ದಿನದಲ್ಲಿ ಮಣ್ಣು ತಿ೦ದವೋ ಹ೦ಗೆ ಇ೦ದೂ ಕೂಡಾ. ಯಹೂದಿಗಳ ಪವಿತ್ರ ಹಬ್ಬ ಯಂ ಕಿಪ್ಪುರ್ ದಿನವೇ ಯುದ್ಧ ಸಾರಿದ ಧೂರ್ಥರು ಇದೇ ಅರಬರು. ಎ೦ಟೆಬ್ಬೆ ಘಟನೆ ಆಗಿರಲಿ, ಮ್ಯುನಿಕ್ ವಿಷಯ ಆಗಿರಲಿ ಎಲ್ಲೂ ಸೋಲೊಪ್ಪಿಕೊಳ್ಳದೆ ಸೆಟೆದು ನಿ೦ತ ಇಸ್ರೇಲ್ ಅನ್ನು ನೋಡುವಾಗ ನಿಮ್ಮ ಮಾತು ನಿಜ ಅನ್ನಿಸ್ತದೆ.
    ಹಾಗೆ ಮೊನ್ನೆಯಷ್ಟೇ ಬೋಕೋ ಹರಮ್ ಇ೦ದ ಅಪಹರಣಕ್ಕೊಳಗಾಗಿರುವ ೨೭೩ ಪುಟ್ಟ ಹೆಣ್ಮಕ್ಕಳ ಬಗ್ಗೆ ಯಾವ “ಪ್ರತಿಭಟನೆ” ಯೂ ನಡೆಸದೆ ಕೇವಲ ಪ್ಯಾಲಸ್ತೀನ್ ಬಗ್ಗೆ ಮಾತ್ರ ಪ್ರತಿಭಟಿಸುವ ಇವರನ್ನು ನ೦ಬಲು ಆಗ್ತಾ ಇಲ್ಲ . ಇವರಿಗೆ ನಿಜವಾಗ್ಲೂ ಕನಿಕರ ಇದ್ದಿದ್ರೆ ಆ ಮುಗ್ಧ ಹೆಣ್ ಮಕ್ಕಳನ್ನ ಉಗ್ರರ ಕಪಿ ಮುಷ್ಟಿಯಿ೦ದ ಬಿಡಿಸಲಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s